Download Now Banner

This browser does not support the video element.

ಹೊಸನಗರ: ಅರಸಾಳು ನಿಲ್ದಾಣದಲ್ಲಿ ಇಂಟರ್‌ಸಿಟಿ ರೈಲು ನಿಲುಗಡೆ, ಸುತ್ತಮುತ್ತಲಿನ ಜನರಲ್ಲಿ ಸಂತಸ

Hosanagara, Shimoga | Oct 6, 2025
ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಹೊಸನಗರ ತಾಲೂಕಿನ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಇಂದಿನಿಂದ ನಿಲುಗಡೆಗೊಳ್ಳಲಿದೆ. ರೈಲ್ವೆ ಇಲಾಖೆ ಈ ನಿರ್ಧಾರವನ್ನು ಪ್ರಾಯೋಗಿಕವಾಗಿ 2025ರ ಅ.06 ರಿಂದ 2026ರ ಜನವರಿವರೆಗೆ ಜಾರಿಗೊಳಿಸಿದೆ. ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಈ ರೈಲು ಸೇವೆಯನ್ನು ಬಳಸಿದಲ್ಲಿ ಅರಸಾಳು ನಿಲುಗಡೆ ಶಾಶ್ವತಗೊಳ್ಳಲಿದೆ. ಐತಿಹಾಸಿಕ ಸಾಧನೆಯನ್ನು ಸ್ವಾಗತಿಸಲು ಅರಸಾಳು ಗ್ರಾಮಸ್ಥರು ಮತ್ತು ಬಿಜೆಪಿ ಕಾರ್ಯಕರ್ತರು ರೈಲಿಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸೋಮವಾರ ಸಂಜೆ 5 ಗಂಟೆಗೆ ಸಂಭ್ರಮಾಚರಣೆ ನಡೆಸಿದರು.
Read More News
T & CPrivacy PolicyContact Us