ಬೀದರ್: ಕಳೆದ 4 ವರ್ಷಗಳಿಂದ ಸುಮಾರು ಜನರಿಗೂ ವಂಚಿಸಿದಲ್ಲದೇ ಸರ್ಕಾರದ ಬೊಕ್ಕಸಕ್ಕೆ 9.25 ಕೋಟಿ ತೆರಿಗೆ ಕಟ್ಟದೆ ವಂಚಿಸಿರುವ ಹಿನ್ನೆಲೆ ಬೀದರ್ ಜಿಲ್ಲೆಯ ನಿವಾಸಿ ರಾಹುಲ ತಂದೆ ಕಿಶನ ಕುಲಕರ್ಣಿ ಅವರನ್ನು ಕಲಬುರಗಿಯ ಪೂರ್ವ ವಲಯದ ಜಾರಿ ವಿಭಾಗದ ಅಧಿಕಾರಿಗಳು ಹಾಗೂ ತೆಲಂಗಾಣ ರಾಜ್ಯದ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳ ಸಹಯೋಗದಿಂದ ಹೈದರಾಬಾದಿನಲ್ಲಿ ದಸ್ತಗಿರಿ ಮಾಡಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಕಲಬುರಗಿ ಪೂರ್ವ ವಲಯ ವಾಣಿಜ್ಯ ತೆರಿಗೆ(ಜಾರಿ) ಇಲಾಖೆಯ ಜಂಟಿ ಆಯುಕ್ತೆ ಯಾಸ್ಮಿನ್ ಬೇಗಂ ಜಿ ವಾಲಿಕಾರ ತಿಳಿಸಿದರು. ನಗರದಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆಗೆ ಕರೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.