ಅನ್ಯಜಾತಿಯ ಯುವಕನನ್ನು ಪ್ರೀತಿ ಮಾಡಿದಳು ಎಂಬ ಕಾರಣಕ್ಕೆ ತನ್ನ 18 ವರ್ಷ ವಯಸ್ಸಿನ ಮಗಳನ್ನು ತಂದೆಯೇ ಕೊಂದು ಶವ ಸುಟ್ಟು ಹಾಕಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ ಹೊರವಲಯದ ಮೇಳಕುಂದಾ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ 18 ವರ್ಷದ ಕವಿತಾ ಮೃತಳಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಫರತಾಬಾದ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮೇಳಕುಂದಾ ಗ್ರಾಮಕ್ಕೆ ಶೆನಿವಾರ 2 ಗಂಟೆಗೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್‌ಡಿ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಪ್ರಕರಣದ ಆರೋಪಿ, ಕವಿತಾಳ ತಂದೆ ಶಂಕರ ಕೊಳ್ಳೂರನನ್ನು ಫರತಾಬಾದ ಪೊಲೀಸರು ಬಂಧಿಸಿದ್ದಾರೆ. ಕವಿತಾ ಇದೆ ಗ್ರಾಮದ ಅನ್ಯ ಜಾತಿಯ ಅಟೋ ಚಾಲಕನನ್ನ ಪ್ರೀತಿ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ....