ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನೆ ವೇಳೆ ಮಫ್ತಿಯಲ್ಲಿದ್ದ ಸಿಪಿಐ ಸುಭಾಷ್ ಚಂದ್ರ ಡಿಜೆ ಸೌಂಡ್‌ಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ ನಗರದಲ್ಲಿ ರಾಜ್‌ಕುಮಾರ್‌ರಸ್ತೆಯಲ್ಲಿನ ಸೆಂಟನರಿ ಹಾಲ್‌ನಲ್ಲಿ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿಯ ಶೋಭಾ ಯಾತ್ರೆ ವೇಳೆ ಕೌಲ್ ಬಜಾರ್ ಠಾಣೆಯ ಸಿಪಿಐ ಸುಭಾಷ್ ಚಂದ್ರ ಅವರು ಡಿಜೆ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲಾರ ಗಮನಸೆಳೆದರು. ಸೆಂಟನರಿ ಹಾಲ್‌ನಲ್ಲಿ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿ ಯನ್ನು 7ನೇ ದಿನ ಮಂಗಳವಾರ ರಾತ್ರಿ 11:30ಕ್ಕೆ ಅದ್ದೂರಿ ಶೋಭಾಯಾತ್ರೆ ಯೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.