ನಗರದ ಆರ್.ಪಿ. ರಸ್ತೆಯಲ್ಲಿ ಉದ್ದೇಶಿತ ರೈಲ್ವೆ ಮೇಲ್ಸೇತುವೆ ನಕ್ಷೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಸ್ಥಳೀಯರು ಮೇಲ್ಸೇತುವೆ ನಕ್ಷೆಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವರು ವೀಕ್ಷಿಸಲು ಅಳವಡಿಸಿರುವ ಅವೈಜ್ಞಾನಿಕ ನಕ್ಷೆಯನ್ನು ಸರಿಯಲ್ಲ. ಅದನ್ನು ತೆಗೆಯುವಂತೆ ಸ್ಥಳೀಯರು ಎಚ್ಚರಿಕೆಯನ್ನು ಸಂಘಟಕರಿಗೆ ನೀಡಿದರು. ನಂಜನಗೂಡಿನ ಮೇಲ್ಸೇತುವೆ ಕಾಮಗಾರಿಯ ಗೊಂದಲಕ್ಕೆ ತೆರೆ ಎಳೆಯುವ ಸಲುವಾಗಿ ರೈಲ್ವೆ ಸಚುವರು ಭೇಟಿ ನೀಡಿದ್ದರು. ನಗರದ ಸಾರ್ವಜನಿಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ನೇರವಾಗಿ ರೈಲ್ವೆ ಮೇಲ್ಸೇತುವೆಯನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.