ಹುಬ್ಬಳ್ಳಿ: ಹುಬ್ಬಳ್ಳಿಯ ಸಹಜ ಸಮೃದ್ಧ ಮತ್ತು ಅರ್ಬನ್ ಓಯಸಿಸ್ ಮಾಲ್‌ನಲ್ಲಿ ಎರಡು ದಿನಗಳ ದೇಸಿ ಅಕ್ಕಿ ಮೇಳ ಆರಂಭವಾಗಿದೆ. ಈ ಮೇಳದಲ್ಲಿ ರೈತರು ತಮ್ಮ ಸಾವಯವ ಕೃಷಿಯಲ್ಲಿ ಬೆಳೆದ ಸಾಂಪ್ರದಾಯಿಕ ಮತ್ತು ದೇಸಿ ಭತ್ತಗಳನ್ನು ಸಂರಕ್ಷಿಸಿ, ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ತಂದ ಕೆಂಪು ಅಕ್ಕಿ ಸೇರಿದಂತೆ ದೇಶಿಯ ತಳಿಗಳು ಪ್ರದರ್ಶನಗೊಂಡಿದ್ದು, ಗ್ರಾಹಕರ ಗಮನ ಸೆಳೆಯುತ್ತಿದೆ.