ಮುಂದಿನ ತಿಂಗಳು ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹದ ಹಣವನ್ನು ಪಂಜಾಬ್ ರಾಜ್ಯದ ನೆರೆಪೀಡಿತ ಜನರ ಸಹಾಯಕ್ಕಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಲಿಮ್ರಾ ಸಂಸ್ಥೆಯ ಅಧ್ಯಕ್ಷ ಅಬ್ದುಲರಜಾಕ ತಟಗಾರ ಹೇಳಿದರು. ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಸೆ.೧೧ ಮಧ್ಯಾಹ್ನ ೨ ಗಂಟೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಪಂಜಾಬಿನ ಷಾಹಿ ಇಮಾಮ ಉಸ್ಮಾನಸಾಹೇಬರ ಜೊತೆಗೆ ಮಾತನಾಡಲಾಗಿದೆ ಅಲ್ಲಿನ ಜನರ ಪರಿಸ್ಥಿತಿ ನೋಡಿದರೆ ಕರುಳು ಕಿತ್ತು ಬರುತ್ತದೆ ಎಂದು ಹೇಳಿದರು. ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರ್ ೧೫೦೦ ನೇ ಜನುಮ ದಿನದ ಅಂಗವಾಗಿ ಸೆ ೧೯ ರಂದು ನಗರದ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಸಾನಿಧ್ಯವನ್ನು ಗುರುಮಹಾಂತಶ್ರೀಗಳು, ಮುರ್ತುಜಾ ಖಾದ್ರಿ ದರ್ಗಾ ಗುರು