ಭಾರತೀಯ ವಾಯು ಸೇನೆಗೆ ನೇಮಕವಾಗಿರುವ 118 ವೈದ್ಯಕೀಯ ಸಹಾಯಕರ ಪಾಸಿಂಗ್ ಔಟ್ ಪೆರೇಡ್ ಬೆಂಗಳೂರಿನಲ್ಲಿ ನಡೆಸಲಾಗಿದೆ.ಸೆಪ್ಟೆಂಬರ್ 6ರಂದು ಬೆಂಗಳೂರಿನಲ್ಲಿರುವ ವಾಯುಪಡೆಯ ವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಪರೇಡ್ ನಡೆಸಲಾಗಿದೆ. ಈ ಕುರಿತು ಸೆಪ್ಟೆಂಬರ್ 7ರಂದು ಬೆಳಿಗ್ಗೆ 10 ಗಂಟೆಗೆ ಭಾರತೀಯ ಸೇನೆಯ ಪತ್ರಿಕಾ ಸಂವಹನ ವಿಭಾಗ ಮಾಹಿತಿ ನೀಡಿದ್ದು, ಪರೇಡ್‌ನಲ್ಲಿ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್‌ನ ಪ್ರಧಾನ ಕಚೇರಿಯ ಆಡಳಿತ ವಿಭಾಗದ ಹಿರಿಯ ಅಧಿಕಾರಿ ಹಾಗೂ ಏರ್ ವೈಸ್ ಮಾರ್ಷಲ್ ಬಿಜೊ ಜಾನ್ ಮಾಮ್ಮೆನ್ ಮೆರವಣಿಗೆಯನ್ನು ಪರಿಶೀಲಿಸಿದರು. ಹಾಗೂ ಬೆಂಗಳೂರು ಪ್ರದೇಶದ ವಾಯುಪಡೆ ಮತ್ತು ಸೇನಾ ಘಟಕಗಳ ವಿವಿಧ ಗಣ್ಯರು ಭಾಗಿಯಾಗಿದ್ದರು" ಎಂದು ತಿಳಿಸಿದೆ.