ಹಾವೇರಿ ಜಿಲ್ಲೆಯಲ್ಲಿ ವರದಾ ನದಿಗೆ ಕಟ್ಟಲಾಗಿದ್ದ ಸೇತುವೆ ಕಂ ಬ್ಯಾರೇಜಗಳ ಕ್ರೈಸ್ಟಗೇಟಗಳನ್ನ ಕಳ್ಳರು ಕದ್ದಿದ್ದಾರೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ ಇತ್ತ ನೀರು ನಿಲ್ಲಿಸಲು ಕ್ರೈಸ್ಟಗೇಟಗಳಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿಯಾದರೆ ಬೇಸಿಗೆಯಲ್ಲಿ ಏನು ಮಾಡಬೇಕು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಗೇಟ್ ಹಾಕುವಂತೆ ರೈತರು ಆಗ್ರಹಿಸಿದ್ದಾರೆ