Download Now Banner

This browser does not support the video element.

ಮೈಸೂರು: ವೈದ್ಯಾಧಿಕಾರಿಗೆ ಬ್ಲಾಕ್ ಮೇಲ್ ಆರೋಪ: ನಗರದಲ್ಲಿ ನ್ಯೂಸ್ ಪೇಪರ್ ಮುಖ್ಯಸ್ಥನ ವಿರುದ್ಧ ದೂರು, ಓರ್ವನ ಬಂಧನ

Mysuru, Mysuru | Aug 27, 2025
ತಿಲಕ್ ನಗರದಲ್ಲಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಕಚೇರಿ ಅಕೌಂಟ್ಸ್ ವಿಭಾಗದ ವೈದ್ಯಾಧಿಕಾರಿಗೆ 25 ಲಕ್ಷ ರೂ. ಬ್ಲಾಕ್ ಮೇಲ್ ಮಾಡಿದ ಆರೋಪದಡಿ RTI ನ್ಯೂಸ್ ಪೇಪರ್ ಮುಖ್ಯಸ್ಥ FIR ದಾಖಲಿಸಿದ ಪೊಲೀಸರು ಈ ಸಂಬಂಧ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. RTI ನ್ಯೂಸ್ ಪೇಪರ್ ನ ಹರೀಶ್ ಆಲಿಯಾಸ್ ರಾಮು ಹಾಗೂ ಪ್ರತಾಪ್ ಎಂಬುವರ ವಿರುದ್ದ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಪ್ರತಾಪ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ಹರೀಶ್ ಆಲಿಯಾಸ್ ರಾಮು ತಲೆಮರೆಸಿಕೊಂಡಿದ್ದಾನೆ. ಈ ಹಿಂದೆ ಹುಣಸೂರಿನಲ್ಲೂ ಹರೀಶ್ @ರಾಮು ವಿರುದ್ದ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಕಚೇರಿಯ ಅಂಕಿತ ಅಧಿಕಾರಿ ಡಾ.ಕಾಂತರಾಜು ದೂರು ನೀಡಿದವರು.
Read More News
T & CPrivacy PolicyContact Us