ಯಲ್ಲಾಪುರ :ತಾಲೂಕಿನ ರಾಜ್ಯ ಹೆದ್ದಾರಿ ೯೩ ಮಂಚಿಕೇರಿ ಸಮೀಪದ ಬಿದ್ರಳ್ಳಿ ಸಮೀಪ ಬುಲೇರೋ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದು 6 ಜನರು ಗಾಯಗೊಂಡ ಘಟನೆ ನಡೆದಿದೆ. ಹಳಿಯಾಳದ ಕೆಸರೊಳ್ಳಿಯ ಗುರುನಾಥ ಶಾಂತಾರಾಮ ಚೋಪಡಿ, ಕಾಳಗಿನಕೊಪ್ಪದ ಸಂದೀಪ ನಿಂಗಪ್ಪ ಶಿವನಗೌಡ, ಹಂದಲಿಯ ಸಚಿನ್ ಪರಶುರಾಮ ಪಾವಲೆ ಸೈಯ್ಯದ್ ಅಲಿ ಉಮರಸಾಬ ಹಳಬ, ಸುನೀಲ ಬಸ್ಯಾವ ಡಿಸೋಜಾ, ಜ್ಞಾನೇಶ್ವರ ತುಕಾರಾಮ ಗಂದೇಟಕರ್ ಗಾಯಗೊಂಡವರಾಗಿದ್ದಾರೆ ಶಿರಸಿ ಕಡೆಯಿಂದ ಬರುತ್ತಿದ್ದ ಬುಲೆರೊ ವಾಹನ, ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. 6 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಾಹನಗಳು ಜಖಂಗೊಂಡಿವೆ. ಬುಲೆರೊ ಚಾಲಕ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಮಲ್ಲಪ್ಪ ವಿರುದ್ಧ ಪೋಲಿಸರು ಪ್ರ