ಧರ್ಮಸ್ಥಳದ ನಾಟಕ ಕೊನೆಗೊಂಡಿದೆ. ಧರ್ಮವೇ ಗೆದ್ದಿದೆ. ಧರ್ಮಸ್ಥಳದ ಪರವಾಗಿ ಮೊದಲ ಹೋರಾಟ ರೂಪಿಸಿದವರೇ ರಾಷ್ಟ್ರಭಕ್ತ ಬಳಗ. ಅದರ ಪ್ರತಿಫಲ ಈಗ ಸಿಕ್ಕಿದೆ ಎಂದು ರಾಷ್ಟ್ರ ಭಕ್ತ ಬಳಗ ಮುಖಂಡ ಶ್ರೀಕಾಂತ್ ಹೇಳಿದರು. ಶಿವಮೊಗ್ಗದಲ್ಲಿ ಶನಿವಾರ ಸಂಜೆ 5:30 ಕ್ಕೆ ಮಾತನಾಡಿದ ಅವರು, ಧರ್ಮಸ್ಥಳಕ್ಕೆ ಇದ್ದ ಕಳಂಕ ಕಳಚಿದೆ ಈ ಹಿನ್ನಲೆಯಲ್ಲಿ ಕೆ.ಈ. ಕಾಂತೇಶ್‌ರವರ ನೇತೃತ್ವದಲ್ಲಿ ಸೆ.2ರ ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಭಕ್ತ ಬಳಗದ ಸಂಚಾಲಕ ಈಶ್ವರಪ್ಪ ಅವರ ನಿವಾಸದಿಂದ ಧರ್ಮಸ್ಥಳಕ್ಕೆ ಸುಮಾರು 300 ವಾಹನಗಳಲ್ಲಿ ರಾಷ್ಟ್ರಭಕ್ತ ಬಳಗದ ಸದಸ್ಯರು ಹಾಗೂ ಧರ್ಮಸ್ಥಳ ಭಕ್ತರು ತೆರಳಿ ವಿಶೇಷ ಪೂಜೆ ಧರ್ಮಸ್ಥಳದಲ್ಲಿ ಸಲ್ಲಿಸಲಾಗುವುದು. ಜೊತೆಗೆ ತರಕಾರಿ ಹಾಗೂ ಅಕ್ಕಿಯನ್ನು ಸಮರ್ಪಿಸಲಾಗುವುದು ಎಂದರು.