ಶಿರಸಿ: ಬೆಣ್ಣೆಹೊಳೆ ಫಾಲ್ಸ್ ನಲ್ಲಿನಾಪತ್ತೆಯಾಗಿದ್ದ ಶಿರಸಿ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ರಾಹುಲ್ ನ ಶವ ಗುರುವಾರ ಪತ್ತೆ ಯಾಗಿದೆ. ಶಿರಸಿಯ ಅರಣ್ಯ ಕಾಲೇಜ್ ನಾಲ್ವರು ವಿದ್ಯಾರ್ಥಿಗಳು ಇತ್ತೀಚೆಗೆ ಬೆಣ್ಣೆಹೊಳೆ ಫಾಲ್ಸ್ ವೀಕ್ಷಣೆಗೆ ಹೋಗಿದ್ದು, ಅವರಲ್ಲಿ ಮೂವರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿ ಓರ್ವ ವಿದ್ಯಾರ್ಥಿ ಕಣ್ಮರೆ ಯಾಗಿದ್ದನು. ನಾಪತ್ತೆಯಾಗಿದ್ದ ಯುವಕನನ್ನು ಶಿರಸಿಯ ಗೋಪಾಲ ಗೌಡ ನೇತೃತ್ವದ ಮಾರಿಕಾಂಬಾ ಲೈಫ್ ಗಾರ್ಡ್ ಐದು ದಿನಗಳ ಕಾಲ ಸತತ ಕಾರ್ಯಾಚರಣೆ ನಡೆಸಿ, ಕೊನೆಗೂ ಶವವನ್ನು ಮೇಲಕ್ಕೆ ತರಲು ಬಹುವಾಗಿ ಶ್ರಮಿಸಿದೆ. ಮಲ್ಪೆಯ ಈಶ್ವರ ನಾಯ್ಕ ತಂಡದವರು, ಅಗ್ನಿಶಾಮಕ ದಳದವರು, ಪೊಲೀಸರು ಹಾಗೂ ಸ್ಥಳೀಯರ ಅಪಾರ ಸಹಾಯಮಾಡಿದ್ದಾರೆ.