ರಾಜ್ಯ ಸರಕಾರ ಕಳೆದ ಆಗಸ್ಟ್ ತಿಂಗಳಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಜಾತಿ ಜನಾಂಗಗಳ ಸಾಮಾಜಿ ಸಮೀಕ್ಷೆಗೆ ಪ್ರಕಟಣೆ ನೀಡಿದ್ದು, ಪ್ರಕಟಿತ ಜಾತಿ ಪಟ್ಟಿಯಲ್ಲಿ ಅನೇಕ ಲೋಪದೋಷಗಳಿವೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಆರ್. ರಘು ಆರೋಪಿಸಿದರು. ಖಾಸಗಿ ಹೋಟೆಲ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 1400 ಜಾತಿಗಳ ಪಟ್ಟಿಯನ್ನು ಸರಕಾರ ಪ್ರಕಟಿಸಿದೆ. ಆ ಪಟ್ಟಿ ಗಮನಿಸಿದಾಗ ಹಲವಾರು ಜಾತಿಗಳು ಇಲ್ಲದಿದ್ದರೂ ಸೃಷ್ಟಿತ ಜಾತಿಗಳ ಹೆಸರು ಸೇರ್ಪಡೆ ಮಾಡಲಾಗಿದೆ. ಬಹಳ ಮುಖ್ಯವಾಗಿ ಹಿಂದುಳಿದ ವರ್ಗಗಳಿಂದ ಕ್ರಿಶ್ಚಿಯನ್ ಸೇರಿದಂತೆ ವಿವಿಧ ಧರ್ಮಗಳಿಗೆ ಮತಾಂತರ ಹೊಂದಿದ್ದರೆ, ಅವರನ್ನು ಹಿಂದುಳಿದ ವರ್ಗಗಳ ಸಮೀಕ್ಷೆ ಯಿಂದ ಹೊರಡಗಿಬೇಕು.