ಯಲ್ಲಾಪುರ: ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಗತಿ ವಿದ್ಯಾಲಯ ಭರತನಹಳ್ಳಿಯ ಮಕ್ಕಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಬಾಬು ತೋರವತ್ 100 ಮೀಟರ್ ಓಟ - ಪ್ರಥಮ, 200ಮೀಟರ್ ಓಟ - ಪ್ರಥಮ, ತ್ರಿಬಲ್ ಜಂಪ್ - ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ವೈಯಕ್ತಿಕ ವೀರಾಗ್ರಣಿ ಪಡೆದಿರುತ್ತಾನೆ.ವೈಯಕ್ತಿಕ ವಿಭಾಗದಲ್ಲಿ ಸಮರ್ಥ ಪೂಜಾರಿ ಉದ್ದ ಜಿಗಿತ - ದ್ವಿತೀಯ, ಲೋಹಿತ ಪೂಜಾರಿ 800m ಓಟ- ತೃತೀಯ, ನಂದನ ಪಟಗಾರ 200 ಮೀಟರ್ ಓಟ - ತೃತೀಯ, ಕೀರ್ತನ ಪಟಗಾರ 400m ಓಟ - ತೃತೀಯ ಸ್ಥಾನ ಪಡೆದಿದ್ದಾರೆ. ಗುಂಪು ವಿಭಾಗದಲ್ಲಿ ಬಾಲಕರ 4x400m ರಿಲೇ- ಪ್ರಥಮ, ಬಾಲಕರ ಬಾಲ್ ಬ್ಯಾಡ್ಮಿಂಟನ್ - ಪ್ರಥಮ,ಬಾಲಕಿಯರ ವಾಲಿಬಾಲ್- ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.