ಹುಬ್ಬಳ್ಳಿ: ಕನ್ನಡ ಮಾತನಾಡುವ ವಿಷಯಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿ ನಡೆದಿದ್ದ ವಾಗ್ವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಂಗಡಿಯ ಸಿಬ್ಬಂದಿಯಿಂದ ಕ್ಷಮೆ ಯಾಚನೆ ಮಾಡಿಸಿದ್ದಾರೆ.ಮೊನ್ನೆಯಷ್ಟೇ ಪಾಲಿಕೆಯ ಆಟೋ ಟಿಪ್ಪರ್ ಚಾಲಕನೊಬ್ಬ ಮಿನಿಸ್ಟರ್ ವೈಟ್ ಶಾಪ್ ನಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಕನ್ನಡದಲ್ಲಿ ಮಾತನಾಡುವಂತೆ ತರಾಟೆಗೆ ತೆಗೆದುಕೊಂಡ ಘಟನೆ ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿ ನಡೆದಿತ್ತು. ಅದೊಂದು ವಿಡಿಯೋ ಸಾಕಷ್ಟು ವೈರಲ್ ಕೂಡ ಆಗಿದ್ದು, ಈ ನಿಟ್ಟಿನಲ್ಲಿ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಂಗಡಿಗೆ ಭೇಟಿ ಕೊಟ್ಟು ಸಿಬ್ಬಂದಿಯಿಂದ ಕನ್ನಡದಲ್ಲಿಯೇ ಕ್ಷಮೆ ಕೋರುವಂತೆ ಮಾಡಿದ್ದಾರೆ.