ಕುಂದಗೋಳ ಮತಕ್ಷೇತ್ರದ ರೇವಡಿಹಾಳ ಗ್ರಾಮದಲ್ಲಿ ಇಂದು ಸರ್ಕಾರಿ ಪ್ರೌಢ ಶಾಲೆಯ ಉನ್ನತೀಕರಣಗೊಂಡ "ನೂತನ ಕೊಠಡಿ"ಯನ್ನು ಶಾಸಕರಾದ ಎಂ.ಆರ್.ಪಾಟೀಲ್ ಅವರು ಉದ್ಘಾಟಿಸಿ ಚಾಲನೆ ನೀಡಿದರು. ನಮ್ಮ ಕುಂದಗೋಳ ಮತಕ್ಷೇತ್ರದ ಸರ್ಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಂತಹ ಮೂಲಭೂತ ಸೌಕರ್ಯಗಳ ಉನ್ನತೀಕರಣಗಳು ತುಂಬಾ ಅನುವುಮಾಡಿಕೊಟ್ಟಂತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಮಾಲತೇಶ ಶಾಗೂಟಿ, ಸಹದೇವ ಮಾಳಗಿ ಸೇರಿದಂತೆ ಉಪಸ್ಥಿತರಿದ್ದರು.