ಚಳ್ಳಕೆರೆ; ನಗರದ ಹೊರಭಾಗದಲ್ಲಿರುವ ಕರೇಕಲ್ ಕೆರೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ನಗರದ ಚಿತ್ರಯ್ಯನಹಟ್ಟಿ ಗೌರಮ್ಮ(ಸು.60) ಸಾವನ್ನಪ್ಪಿದ ದುರ್ದೈವಿ. ಮನೆಯಿಂದ ಹೋದ ಮಹಿಳೆ ಕೆರೆ ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮಹಿಳೆ ಶವವನ್ನು ಶವಗಾರಕ್ಕೆ ಸಾಗಿಸಿದ್ದಾರೆ. ಪ್ರಕರಣ ದಾಖಲಾದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.