ಹಾವೇರಿ ಜಿಲ್ಲೆಯ ಶೇಂಗಾ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿಯಾದ ಮಳೆಯಿಂದ ಶೇಂಗಾ ಜಮೀನಿನಲ್ಲಿ ಕೊಳೆಯಲಾರಂಭಿಸಿದೆ. ಶೇಂಗಾ ಒಣಗಲು ಸರ್ವಿಸ್ ರಸ್ತೆಯಲ್ಲಿ ಹಾಕಿದ್ದರು ಸಹ ರೈತರಿಗೆ ಮಳೆ ಕಾಡುತ್ತಿದೆ. ತಾಡಪಲ್ಲಿಂದ ಶೇಂಗಾ ಬೂಷ್ಟ್ ಬರಲಾರಂಭಿಸಿದ್ದು ಬೆಳೆ ಇಳಿಕೆಯಾಗಿದೆ. ಕಡಿಮೆ ದರಕ್ಕೆ ವರ್ತಕರು ಶೇಂಗಾ ಕೇಳುತ್ತಿದ್ದಾರೆ. ಇತ್ತ ಜಾನುವಾರುಗಳಿಗೆ ಶೇಂಗಾ ಸೊಪ್ಪು ಸಹ ಸಿಗದಂತಾಗಿದೆ. ಸೊಪ್ಪು ಕೊಳೆತಿದ್ದು ರೈತರು ಹೈರಾಣಾಗಿದ್ದಾರೆ.