ಹಾಸನ: ಕರ್ನಾಟಕ ನೊಂದಣಿ ಕಾಯ್ದೆ ಪ್ರಕಾರ ನಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಹೀಗಾಗಿ ನಾನೇ ಅದ್ಯಕ್ಷನಾಗಿ ಮುಂದುವರೆಯುತ್ತೇನೆ ಎಂದು ಎಂಸಿಇ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಆರ್.ಟಿ.ದೇವೇಗೌಡ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 23 ರಂದು ಅಶೋಕ್ ಹಾರನಹಳ್ಳಿ ಹಾಗು 12 ಮಂದಿ ಸಹಿ ಮಾಡಿ ನೀವು ವಿಶ್ವಾಸ ಕಳೆದುಕೊಂಡಿದ್ದೀರಿ ಹದಿನೈದು ದಿನಗಳಲ್ಲಿ ಸಭೆ ಕರೆಯುವಂತೆ ಮನವಿ ಮಾಡಿದ್ದರು. ಅದರಂತೆ ಇಂದು ಸಭೆ ಕರೆಯಲಾಗಿತ್ತು. ಇಂದಿನ ಸಭೆಯಲ್ಲಿಅವಿಶ್ವಾಸ ನಿರ್ಣಯ ಬಗ್ಗೆ ಮಾತ್ರ ಚರ್ಚೆನಡೆಸಬೇಕು ಎಂದು ಸಭೆಯಲ್ಲಿ ಪಟ್ಟು ಹಿಡಿದರು ಎಂದು ವಿವರಿಸಿದರು.