ಮಧುಗಿರಿ: ಅಕ್ರಮವಾಗಿ ಒಣ ಗಾಂಜಾ ಸೊಪ್ಪು ಮಾರುತ್ತಿದ್ದ ಇಬ್ಬರ ಮೇಲೆ ದಾಳಿ ನಡೆಸಿದ ಮಧುಗಿರಿ ಅಬಕಾರಿ ಪೊಲೀಸರು 500 ಗ್ರಾಂ ಹೆಚ್ಚು ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ, ಹೊಸಹಳ್ಳಿ ಗ್ರಾಮದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಉಪ ಆಧೀಕ್ಷಕ ಎಸ್.ದೀಪಕ್ ಅವರ ನೇತೃತ್ವದ ತಂಡ ಹೊಸಹಳ್ಳಿ ಗ್ರಾಮದ ವಾಸಿಯಾದ ಜಗದೀಶ್ ಬಳಿ ಇದ್ದ 287 ಗ್ರಾಂ ಸೊಪ್ಪು, ಹೂ, ಬೀಜ ಹಾಗೂ ತೆನೆ ಮಿಶ್ರಿತ ಒಣ ಗಾಂಜಾ ಹಾಗೂ ಇದೆ ಗ್ರಾಮದ ಅಶ್ವಥಪ್ಪ ಬಳಿ ಇದ್ದ 317 ಗ್ರಾಂ ಸೊಪ್ಪು, ಹೂ, ಬೀಜ ಹಾಗೂ ತೆನೆ ಮಿಶ್ರಿತ ಒಣ ಗಾಂಜಾವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್