ತುಮಕೂರು ಜಿಲ್ಲೆಯ ಹೆಗ್ಗೆರೆಯ ಡಾ.ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಶುಕ್ರವಾರ ಸಂಜೆ 5 ಗಂಟೆಯಲ್ಲಿ ನಡೆದ ಡಾ. ಎಸ್. ರಾಧಾಕೃಷ್ಣನ್ ಅವರ 138ನೇ ಜನ್ಮದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿದರು. ಅವರು, “ಆಧುನಿಕ ಭಾರತದ ಬೆಳವಣಿಗೆಗೆ ಶಿಕ್ಷಣವೇ ಬುನಾದಿ. ಇಂದು ಶಿಕ್ಷಣ ಕ್ಷೇತ್ರದ ಆವಿಷ್ಕಾರಗಳು, ಸಂಶೋಧನೆಗಳು ಭಾರತವನ್ನು ಪ್ರಪಂಚದ ಭೂಪಟದಲ್ಲಿ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿವೆ. ಮಹಿಳಾ ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆ ನೀಡಿದ ಕೊಡುಗೆ ಸದಾ ಸ್ಮರಣೀಯ” ಎಂದು ಅಭಿಪ್ರಾಯಪಟ್ಟರು. ಈ ವೇಳೆ ಶಾಸಕರಾದ ಬಿ. ಸುರೇಶ್‌ಗೌಡ ಮತ್ತು ಜಿ.ಬಿ. ಜ್ಯೋತಿ ಗ