*ಚಿಕ್ಕಮಗಳೂರು: ಬುರುಡೆ ಪ್ರಕರಣದ ರೂವಾರಿಗಳಿಗೆ ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ಟಾಂಗ್* ಚಿಕ್ಕಮಗಳೂರು: ಧರ್ಮಸ್ಥಳದ ವಿರುದ್ಧ ಬುರುಡೆ ಪ್ರಕರಣದ ಕುರಿತಂತೆ ಚಿಕ್ಕಮಗಳೂರಿನಲ್ಲಿ ನಿನ್ನೆ ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ವಿಭಿನ್ನ ರೀತಿಯ ಅಸ್ತಿಪಂಜರ ಗಮನ ಸೆಳೆಯಿತು.ನಗರದ ಮುಖ್ಯ ಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಮೆರವಣಿಗೆಯಲ್ಲಿ, ಬುರುಡೆ ಪ್ರಕರಣದ ರೂವಾರಿಗಳಿಗೆ ಟಾಂಗ್ ನೀಡುವ ಉದ್ದೇಶದಿಂದ ನಕಲಿ ಬುರುಡೆ ಮತ್ತು ಅಸ್ಥಿಪಂಜರದ ಮಾದರಿಯ ಗೊಂಬೆಯನ್ನು ಪ್ರದರ್ಶನಗೊಳಿಸಲಾಯಿತು. ಈ ಬಾರಿ ಗಣೇಶೋತ್ಸವಕ್ಕೆ ನಗರದ ಹನುಮಂತಪ್ಪ ವೃತ್ತದ