ಯಲ್ಲಾಪುರ : ಶಿಕ್ಷಕರ ವೃತ್ತಿಗೆ ನಿವೃತ್ತಿ ಹೊರತು ಕಲಿಸುವಿಕೆ ಪ್ರವೃತ್ತಿ ಹಾಗೆ ಇರಬೇಕು. ನಮ್ಮ ಜಿಲ್ಲೆಯ ಶಿಕ್ಷಕರ ಬಗ್ಗೆ ರಾಜ್ಯದಲ್ಲಿಯೇ ವಿಶೇಷ ಗೌರವವಿದೆ. ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಅವರು ಪಟ್ಟಣದ ರೈತ ಭವನದಲ್ಲಿ ಕ್ಷೇತ್ರ ಶಿಕ್ಷಣಧಿಕಾರಿಗಳ ಕಾರ್ಯಾಲಯ, ಅಂಕೋಲಾ ಅರ್ಬನ ಭ್ಯಾಂಕ ಸಹಯೋಗದಲ್ಲಿ ಶಿಕ್ಷಕರ ದಿನಾಚಾರಣೆ ಅಂಗವಾಗಿ ಹಮ್ಮಿಕೊಂಡಿದ್ದ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗ ನಿವೃತ್ತ ಶಿಕ್ಷಕರ ನ್ನು ಸನ್ಮಾನಿಸಿದರು.