ಆಗಸ್ಟ್ 25 ರ ಮಧ್ಯಾಹ್ನ ಒಂದು ಗಂಟೆ 30 ನಿಮಿಷಕ್ಕೆ ದೇವನಹಳ್ಳಿ ಪಟ್ಟಣದ ಸರ್ಕಾರಿ ಶಾಲೆ ಕಿಟಕಿ ಸಜ್ಜೆ ಕುಸಿತ ಆಗುತ್ತೆ. ಪರಿಣಾಮ ಮೂವರು ಮಕ್ಕಳು ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಆಗಸ್ಟ್ 26 ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳು ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಸಿದ್ದಾರೆ. ದರ್ಶನ್ ಎನ್ನುವ ವಿದ್ಯಾರ್ಥಿಯ ಕಾಲು ಮೂಳೆ ಮುರಿದಿದ್ದು ಚಿಕಿತ್ಸಾ ವೆಚ್ಚ ಶಿಕ್ಷಣ ಇಲಾಖೆ ಭರಿಸುವುದಾಗಿ ಶಿಕ್ಷಣ ಸಚಿವರು ಭರವಸೆ ಕೊಟ್ಟಿದ್ದಾರೆ. ಮುಂದೆ ಇಂತಹ ಘಟನೆ ಪುನರಾವರ್ತನೆ ಆಗದಂತೆ ಸೂಚನೆ ಕೊಟ್ಟಿದ್ದಾರೆ. ಏನೇ ಆದ್ರೂ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಸುರಕ್ಷತೆ ವಿಚಾರವಾಗಿ ಗಂಭೀರವಾಗಿ ಚರ್ಚೆ ಆಗುತ್ತಿದೆ.