ಹಿಂದೂ ದೇವಸ್ಥಾನಗಳಿಗೆ ಅವಮಾನ ಮಾಡುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಪ್ರೇರಣೆ ಪಡೆದ ಕೆಲವು ವ್ಯಕ್ತಿಗಳು ಧರ್ಮಸ್ಥಳದಲ್ಲಿ ಕುತಂತ್ರ ನಡೆಸುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಕಿಡಿಕಾರಿದ್ದಾರೆ. ಮೂಡಿಗೆರೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಎಸ್ಐಟಿ ಮೂಲಕ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಯತ್ನವೇ ನಡೆದಿತ್ತು. ಆದರೆ ಈಗ ಎಸ್ಐಟಿ ತನಿಖೆಯಿಂದ ಸತ್ಯ ಹೊರಬರುತ್ತಿದ್ದು, ಕುತಂತ್ರ ನಡೆಸಿದವರಿಗೆ ತಿರುಗುಬಾಣವಾಗುತ್ತಿದೆ ಎಂದರು.ಧರ್ಮಸ್ಥಳ ಹಾಗೂ ವೀರೇಂದ್ರ ಹೆಗಡೆ ಅವರಿಗೆ ಅವಮಾನ ಮಾಡುವುದನ್ನು ಹಿಂದೂ ಸಮಾಜ ಯಾವ ಕಾರಣಕ್ಕೂ ಸಹಿಸುವುದಿಲ್ಲವೆಂದ ಅವರು ಅಯೋಧ್ಯೆಗೆ ನ್ಯಾಯ ಸಿಕ್ಕಂ