ಆಳಂದ ಚೆಕ್ ಪೋಸ್ಟ್ ರಾಮತೀರ್ಥ ಮಂದಿರ ಮಾರ್ಗದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿತ್ತು ಎನ್ನಲಾದ ಒಂಬತ್ತು ಗೋವುಗಳನ್ನ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ. ಸಾಗಾಟ ಮಾಡುತ್ತಿದ್ದ ಬೊಲೆರೋ ಪಿಕ್ ಅಪ್ ವಾಹನವನ್ನು ಹಿಡಿದು ಗೋವುಗಳನ್ನ ರಕ್ಷಣೆ ಮಾಡಿ ಸಬ್ ಅರ್ಬನ್ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾಗಿ ಸೇನೆಯ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾಧಿ ಬುದವಾರ 6 ಗಂಟೆಗೆ ಮಾಹಿತಿ ನೀಡಿದ್ದಾರೆ.