ಚಲನಚಿತ್ರದಲ್ಲಿ ನಟನೆ ಯಿಂದ ಸದ್ಯ ದೂರ ಇದ್ದೇನೆ ನಾನು ಇವಾಗ ಎರಡು ಮಕ್ಕಳ ತಾಯಿ ಆದ್ದರಿಂದ ತಾಯಿ ಕರ್ತವ್ಯ ಮಾಡುತ್ತಿದ್ದೇನೆಂದು ಚಲನಚಿತ್ರ ನಟಿ ಸಂಜನಾ ಗೆಲ್ರಾಣಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ನನಗೆ ಎರಡು ಮಕ್ಕಳು ಇದ್ದಾರೆ 4 ತಿಂಗಳು ಮಗು ಇದೆ ನನ್ನ ಕರ್ತವ್ಯ ನಿಭಾಯಿಸಲು. ಚಲನಚಿತ್ರದ ನಟನೆಯಿಂದ ಸದ್ಯ ದೂರ ಇರುವುದಾಗಿ ಹೇಳಿದ್ದಾರೆ. ಮತ್ತೆ ನನ್ನ ವೃತ್ತಿಗೆ ಬರುತ್ತೇನೆ. ಇನ್ನು ಪ್ಯಾನ್ ಇಂಡಿಯ ಸಿನಿಮಾಗಳು ಪ್ರೊಡ್ಯೂಸರ್ ಗಳಿಗೆ ಚಾಲೆಂಜಿಂಗ್ ಆಗಿವೆ. ಇವಾಗ ಎಲ್ಲರೂ ಕಾಲದ ಜೊತೆ ಬದಲಾಗಲೇಬೇಕು. ಓ ಟಿ ಟಿ ಗಳು ಓಪನ್ ಆಗಿವೆ. ತೆಲುಗು, ಹಿಂದಿ ಸಿನಿಮಾಗಳಿಗೆ ದೊಡ್ಡ ಮಟ್ಟದಲ್ಲಿ ಓಪನ್ ಆಗಿವೆ ಕನ್ನಡದಲ್ಲಿ ಕೂಡ ಓ ಟಿ ಟಿ ಗಳು ಓಪನ್ ಆಗುತ್ತವೆ ಎಂದರು.