ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನ ಕಿಡಿಗೇಡಿಯೋರ್ವ ಜಖಂಗೊಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಸೆಪ್ಟೆಂಬರ್ 10ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಡಾಲರ್ಸ್ ಕಾಲೋನಿಯ ಆರ್‌ಎಂವಿ 2ನೇ ಹಂತದಲ್ಲಿ ಘಟನೆ ನಡೆದಿದ್ದು, ಮೂಡಿಗೆರೆ ಮೂಲದ ಆರೋಪಿ ಪವನ್‌ನನ್ನ ಸ್ಥಳಿಯರು ಹಿಡಿದಿದ್ದಾರೆ.ಪಾನಮತ್ತನಾಗಿ ಬಂದಿರುವ ಆರೋಪಿ, ಕಲ್ಲಿನಿಂದ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರಿನ ಗಾಜುಗಳನ್ನ ಜಖಂಗೊಳಿಸಿದ್ದಾನೆ.ಸದ್ಯ ಆರೋಪಿಯನ್ನ ಸ್ಥಳಿಯರೇ ಸಂಜಯನಗರ ಠಾಣೆ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.