ವರದಕ್ಷಿಣೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಪತಿ-ಪತ್ನಿಯ ನಡುವೆ ಆರೋಪ-ಪ್ರತ್ಯಾರೋಪ ಶುರುವಾಗಿದೆ, ಪತ್ನಿ ಪ್ರೇರಣಾ, ಪತಿ ಪ್ರಜ್ವಲ್ ಶಂಕರ್ ಹಾಗೂ ಅವರ ಕುಟುಂಬದ ಮೇಲೆ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಪ್ರೇರಣಾ ಮದುವೆ ಸಮಯದಲ್ಲಿ ನೀಡಿದ್ದ ಚಿನ್ನ-ಬೆಳ್ಳಿ ಆಭರಣಗಳನ್ನು ಹಿಂತಿರುಗಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಕಳೆದ ಶುಕ್ರವಾರ ಪತಿಯ ಮನೆಯ ಮುಂದೆ ತಾಯಿಯೊಂದಿಗೆ ಧರಣಿ ನಡೆಸಿದ್ದರು. ಇದರ ವಿರುದ್ಧ ಬುಧವಾರ ಮಧ್ಯಾಹ್ನ 2 ಗಂಟೆಯಲ್ಲಿ ನಗರದಲ್ಲಿ ಪತಿ ಪ್ರಜ್ವಲ್ ಶಂಕರ್ ಸುದ್ದಿಗೋಷ್ಠಿ ನಡೆಸಿ “ನಾವು ವರದಕ್ಷಿಣೆ ಪಡೆದಿಲ್ಲ, ಎಲ್ಲ ಆರೋಪಗಳು ಸುಳ್ಳು” ಎಂದು ಸ್ಪಷ್ಟನೆ ನೀಡಿದ್ದಾರೆ. ...