ಸಂಡೂರು ತಾಲೂಕಿನ ವಡ್ಡು ಗ್ರಾಮದಿಂದ ಗಾದಿಗನೂರಿಗೆ ಸಂಪರ್ಕ ಕಲ್ಪಿಸುವ ಸೇತುವೆಯಿಂದ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಭಾನುವಾರ ಮಧ್ಯಾಹ್ನ 2 ಗಂಟೆಗೆ ಪತ್ತೆಯಾಗಿದೆ.ಶನಿವಾರ ಸಂಡೂರು ತಾಲೂಕಿನ ವಡ್ಡು ಗ್ರಾಮದ ನಿವಾಸಿ ಯುವರಾಜ(೨೨) ನಾರಿಹಳ್ಳಕ್ಕೆ ಬೈಕ್ ಸಮೇತ ನೀರಿಗೆ ಬಿದ್ದಿದ್ದ. ಯುವರಾಜ್ ಗಾಗಿ ಸ್ಥಳೀಯರೂ ಸೇರಿದಂತೆ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಶನಿವಾರದಿಂದ ಶೋಧ ಕಾರ್ಯಾಚರಣೆ ನಡೆಸಿದ್ದರು. ಭಾನುವಾರ ಮಧ್ಯಾಹ್ನ ಯುವರಾಜ ಮೃತದೇಹ ಹಳ್ಳದಲ್ಲಿ ಪತ್ತೆಯಾಗಿದೆ. ಯುವಕನು ಜಿಂದಾಲ್ ಕಾರ್ಮಿಕನಾಗಿದ್ದು, ರಾತ್ರಿ ಪಾಳೆಯ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಹಳ್ಳದ ನೀರು ಸೇತುವೆಯ ಮೇಲೆ ಅಪಾರ ಪ್ರಮಾಣದಲ್ಲಿ ಹರಿಯುತ್ತಿದ್ದರೂ ಗ