ಮಲೆನಾಡಿನಲ್ಲಿ ಗೌರಿ ಹಬ್ಬದ ಸಂದರ್ಭದಲ್ಲಿ ಮಾತ್ರ ಅರಳುವ ಈ ವಿಶೇಷ ಹೂವಿನೊಂದಿಗೆ ಮಂಗಳ ಗೌರಿಗೆ ಪೂಜೆಯನ್ನು ಸಲ್ಲಿಸಿ ಹಬ್ಬವನ್ನು ಆಚರಿಸಲಾಗುತ್ತದೆ. ಹೌದು ಪಶ್ಚಿಮ ಘಟ್ಟದ ದಟ್ಟ ಕಾಡಿನ ಪೊದೆಯಲ್ಲಿ ಕಡು ಕೇಸರಿ ಬಣ್ಣದ ಅಗ್ನಿಶಿಖೆಯಂತೆ ಅರಳಿರುವ ಅಪರೂಪದ ‘ಗೌರಿ ಹೂ’ ಈಗ ಮಲೆನಾಡಿನ ಮನೆಮಠಗಳಲ್ಲಿ ಚೌತಿ ಹಬ್ಬದ ಗೌರಿಯ ಮುಡಿಗೇರಿದೆ. ಮಲೆನಾಡಿನ ಸಂಸ್ಕೃತಿಯಲ್ಲಿ ಗೌರಿ ಪೂಜೆಯ ಅವಿಭಾಜ್ಯ ಅಂಗವೇ ಈ ಹೂ. ಮನೆಯಲ್ಲಿ ಹೆಣ್ಣುಮಕ್ಕಳು ಗೌರಿಯನ್ನು ಆರಾಧಿಸುತ್ತಿದ್ದರೆ ಅಡವಿಯಲ್ಲಿ ವರ್ಷಕ್ಕೆ ಓಮ್ಮೆ ಅರಳುವ ಈ ಅಪರೂಪದ ಹೂವನ್ನು ಹಿರಿಯರು ಮಾತ್ರ ಸಂಗ್ರಹಿಸುವ ಪದ್ಧತಿ ಇಂದಿಗೂ ಜೀವಂತವಿದೆ.10ರಿಂದ 15ಅಡಿ ಎತ್ತರದವರೆಗೂ ಈ ಸಸ್ಯದಲ್ಲಿ ಅರಳುವ ಆರು ದಳಗಳ ಅಪರೂಪದ ಹೂವು ನೋಡುಗರನ್ನು ಆಕರ್ಷಿಸು