ಸಂಡೂರು ತಾಲೂಕಿನ ವಡ್ಡು ಗ್ರಾಮದಿಂದ ಗಾದಿಗನೂರಿಗೆ ಸಂಪರ್ಕ ಕಲ್ಪಿಸುವ ಸೇತುವೆಯಿಂದ ಬಿದ್ದು ಬೈಕ್ ಸವಾರನೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಸಂಡೂರು ತಾಲೂಕಿನ ವಡ್ಡು ಗ್ರಾಮದ ನಿವಾಸಿ ಯುವರಾಜ(೨೨) ನಾರಿಹಳ್ಳಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಬೈಕ್ ಸಿಕ್ಕಿದ್ದು, ಯುವಕನು ನೀರಿನಲ್ಲಿ ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ಯುವಕನು ಜಿಂದಾಲ್ ಕಾರ್ಮಿಕನಾಗಿದ್ದು, ರಾತ್ರಿ ಪಾಳೆಯ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಹಳ್ಳದ ನೀರು ಸೇತುವೆಯ ಮೇಲೆ ಅಪಾರ ಪ್ರಮಾಣದಲ್ಲಿ ಹರಿಯುತ್ತಿದ್ದರೂ ಗಮನಿಸಿದೇ ಬೈಕ್ ಚಲಾಯಿಸಿ ಈ ಘಟನೆ ನಡೆದಿರಬಹುದು ಎಂದು ಸ್ಥಳಿಯರು ಸಂಶಯ ವ್ಯಕ್ತಪಡಿಸಿದ್ದಾರೆ. ತಾರಾನಗರ ಗ್ರಾಮದ ಹೊರ ವಲಯದಲ್ಲಿನ ನಾರಿಹಳ್ಳ ಜಲಾಶ