Download Now Banner

This browser does not support the video element.

ಯಲ್ಲಾಪುರ: ಲಕ್ಷ್ಮೇಶ್ವರ: ಕಾಳಮ್ಮ ನಗರ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಶಾಸಕ ಹೆಬ್ಬಾರ್ ಚಾಲನೆ

Yellapur, Uttara Kannada | Sep 22, 2025
ಯಲ್ಲಾಪುರ: ಆಟದಲ್ಲಿ ಸೋಲುಗೆಲವು ಮುಖ್ಯವಲ್ಲ. ಕ್ರೀಡಾಮನೋಭಾವನೆಯಿಂದ ಭಾಗವಹಿಸಿ.ಇಲ್ಲಿ ಗೆದ್ದು ರಾಜ್ಯಮಟ್ಟಕ್ಕೆ ಹೋಗುವಂತಾಗಲಿ.ಸೋತವರು ಮುಂದಿನ ಗೆಲುವಿಗಾಗಿ ಶ್ರಮವಹಿಸಿ. ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಅವರುಸೋಮವಾರ ಪಟ್ಟಣದ ಕಾಳಮ್ಮ ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ 17 ವರ್ಷ ವಯೋಮಿತಿ ಒಳಗಿನ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ,ಕ್ರೀಡಾ ದ್ವಜಾರೋಹಣ,ಕ್ರೀಡಾಜ್ಯೋತಿ ಸ್ವೀಕರಿಸುವ ಮೂಲಕ ಚಾಲನೆ ನೀಡಿಮಾತನಾಡಿದರು. ಈ ಸಂದರ್ಭದಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ವ್ಹೀಲ್ ಚೇರ್‌,ಕ್ರೀಡಾ ಪರಿಕರಗಳನ್ನು ವಿತರಿಸಿದರು.ಹಾಗೂ ಕ್ರೀಡಾಸಾಧಕರನ್ನು ಮತ್ತು ತಾಲೂಕಿನ ವಿವಿಧ ಶಾಲೆಯ ದೈಹಿಕ ಶಿಕ್ಷಕರನ್ನು ಗೌರವಿಸಲಾಯಿತು.
Read More News
T & CPrivacy PolicyContact Us