ನವಲಗುಂದ: ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ನವಲಗುಂದ, ಖನ್ನೂರ ಗ್ರಾಮದ ಆರ್.ವಿ.ಎಸ್.ಪಬ್ಲಿಕ್ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನವಲಗುಂದ ತಾಲೂಕಾ ಮಟ್ಟದ 14-17 ವಯೋಮೊತಿ ಇಲಾಖಾ ಕ್ರೀಡಾಕೂಟ - 2025ರ ಕಾರ್ಯಕ್ರಮವನ್ನು ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಬಿ.ಮಲ್ಲಾಡ, ಚೇರಮನ್ ಸುರೇಶ ಅಂಗಡಿ, ಕ್ಷೇತ್ರ ಸಮನ್ವಾಯಧಿಕಾರಿಗಳಾದ ಶ್ರೀಮತಿ ರೇಣುಕಾ ಮುರನಾಳ ಸೇರಿದಂತೆ ಉಪಸ್ಥಿತರಿದ್ದರು.