ಯಲ್ಲಾಪುರ : ಹಿಂದುಳಿದ ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ, ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ದಿ ದೇವರಾಜು ಅರಸು ರಂತಹ ಮಹನೀಯರ ತತ್ವಾದರ್ಶಗಳು ನಮಗೆಲ್ಲರಿಗೂ ಮಾರ್ಗದರ್ಶನವಾಗಬೇಕು ಎಂದು ಶಾಸಕ ಪಟ್ಟಣ ಪಂಚಾಯತ್ ಅಧ್ಯಕ್ಷೆ ನರ್ಮದಾ ನಾಯ್ಕ ಹೇಳಿದರು.ಅವರು ಪಟ್ಟಣದ ದಿ ದೇವರಾಜ ಅರಸು ಭವನದಲ್ಲಿ ಪಟ್ಟಣ ಪಂಚಾಯತ, ತಾಲ್ಲೂಕು ಪಂಚಾಯತ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಿಂದ ಜರುಗಿದ ದಿ. ದೇವರಾಜ್ ಅರಸು ಅವರ 1l0ನೇ ಜನ್ಮ ದಿನಾಚರಣೆ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ತಹಸೀಲ್ದಾರ್ ಚಂದ್ರಶೇಖರ್ ಹೊಸಮನಿ ಇತರರು ಇದ್ದರು.