ವಯೋವೃದ್ಧರು ಚಿಕಿತ್ಸೆಗೆಂದು ಕಲಬುರಗಿ ನಗರಕ್ಕೆ ಬಂದು ಆಟೋದಲ್ಲಿ ಮರೆತುಹೋದ ಚಿನ್ನಾಭರಣವನ್ನು ನಗರ ಪೊಲೀಸ್‌ಸರು ಕೇವಲ 48 ಗಂಟೆಗಳಲ್ಲೇ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರ ಮಾಡಿ, ಚಿನ್ನ ಕಲೆದುಕೊಂಡವರು ನೆಮ್ಮದಿಯ ಉಸಿರು ಬಿಡುವಂತೆ ಮಾಡಿದ್ದಾರೆ. ಸುಮಾರು 40 ಗ್ರಾಂ ತೂಕದ, ₹4 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಯೋವೃದ್ಧರು ಆಟೋದಲ್ಲಿ ಬಿಟ್ಟುಹೋಗಿದ್ದು, ಘಟನೆ ಬಗ್ಗೆ ದೂರು ದಾಖಲಾದ ತಕ್ಷಣವೇ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಅವರ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ಆರಂಭಿಸಿದರು. ಚುರುಕಾಗಿ ಕಾರ್ಯಾಚರಣೆ ನಡೆಸಿ ಆಟೋ ಚಾಲಕನನ್ನು ಪತ್ತೆಹಚ್ಚಿ, ಮರೆತುಹೋದ ಆಭರಣಗಳನ್ನು ವಶಪಡಿಸಿಕೊಂಡು ಗುರುವಾರ 6 ಗಂಟೆಗೆ ಆಯುಕ್ತಾಲಯದಲ್ಲಿ ಪತ್ತೆಯಾದ ಆಭರಣಗಳನ್ನು ವಾರಸು