ಹಾಸನ: ತಾಲೂಕಿನ ಕಾರೇಕೆರೆ ಬಳಿ ಇರುವ ಕೃಷಿ ಮಹಾವಿದ್ಯಾಲಯ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಡಿಯಲ್ಲಿ ಅಂತಿಮ ವರ್ಷದ ಕೃಷಿ ಮತ್ತು ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳ ಜೊತೆಗೆ ಪಶು ವೈದ್ಯಕೀಯ ಕಾಲೇಜು, ಹಾಸನದ ಅಂತಿಮ ವರ್ಷದ ವಿದ್ಯಾರ್ಥಿಗಳು ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರವನ್ನು ಹಂಪನಹಳ್ಳಿಯಲ್ಲಿ ಇಂದು ಯಶಸ್ವಿಯಾಗಿ ನಡೆಸ ಲಾಯಿತು. ಈ ಕಾರ್ಯಕ್ರಮದಲ್ಲಿ ಹಾಸನದ ಪಶು ವೈದ್ಯಕೀಯ ಕಾಲೇಜಿನ ಪಶು ವೈದ್ಯರು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಚರ್ಮ ರೋಗಗಳು, ಕೆಚ್ಚಲು ಬಾವು, ಜ್ವರ, ಹಸುವಿನ ಗರ್ಭಕೋಶ ಶುದ್ಧೀಕರಣ ಮುಂತಾದ ರೋಗಗಳಿಗೆ ಉಚಿತ ತಪಾಸಣೆ ಮಾಡಿ ಸ್ಥಳದಲ್ಲೆ ಲಸಿಕೆ ಮತ್ತು ಔಷಧಗಳನ್ನು ವಿತರಿಸಲಾಯಿತು. ಇದೆ ವೇಳೆ ಒಟ್ಟು ೬೫ ಪಶುಗಳ ತಪಾಸಣೆ ಮಾಡಿದರು