ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ ಕಳೆದ 3 ದಿನಗಳಲ್ಲಿ 28 ರಸ್ತೆಗಳಲ್ಲಿ 26.15 ಕಿ.ಮೀ. ವ್ಯಾಪ್ತಿಯ 445 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಹಾಗೂ 24,905 ಚದರ ಕಿ.ಮೀ. ವಿಸ್ತೀರ್ಣದ ಪ್ಯಾಚ್ ವರ್ಕ್ ಕಾರ್ಯ ಮಾಡಲಾಗಿದೆ ಎಂದು ಆಯಕ್ತ ರಾಜೇಂದ್ರ ಚೋಳನ್ ತಿಳಿಸಿದರು. ಸೆಪ್ಟೆಂಬರ್ 24ರಂದು ಸಂಜೆ 5 ಗಂಟೆಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು, 'ರಸ್ತೆ ಗುಂಡಿ ಮುಚ್ಚುವುದು ಸದ್ಯದ ನಮ್ಮ ಮೊದಲ ಆದ್ಯತೆಯಾಗಿದ್ದು, ಇಂದೂ ಸಹ ಆ ಕಾರ್ಯವನ್ನ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದೆ' ಎಂದು ಮಾಹಿತಿ ನೀಡಿದರು.