ನಗರಪಾಲಿಕೆ ಕೈಗೊಂಡ ಒಳ ಚರಂಡಿ ಕಾಮಗಾರಿ ಸ್ಥಳದಲ್ಲಿ ಲಾರಿ ಚಕ್ರ ಸಿಲುಕಿಕೊಂಡ ಘಟನೆ ನಗರದ ದೇವರಾಜ ಮಾರುಕಟ್ಟೆ ಬಳಿ ನಡೆದಿದೆ. ದೇವರಾಜ ಮಾರುಕಟ್ಟೆ ಸಮೀಪ ನಡೆಸಲಾದ ಒಳ ಚರಂಡಿ ಕಾಮಗಾರಿ ಬಳಿಕ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದ ಕಾರಣಕ್ಕೆ ಖಾಸಗಿ ಸಂಸ್ಥೆಯೊಂದಕ್ಕೆ ವಸ್ತುಗಳನ್ನು ಅನ್ ಲೋಡ್ ಮಾಡಲು ಬಂದ ಭಾರೀ ವಾಹನದ ಚಕ್ರ ಹಳ್ಳದಲ್ಲಿ ಸಿಲುಕಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಯಿತು.