ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನಿಧಿಗಳ್ಳರ ಹಾವಳಿ ಮತ್ತೆ ಹೆಚ್ಚಾಗಿದೆ. ಒಂದು ತಿಂಗಳ ಹಿಂದೆ ಚಿಕ್ಕಜಾಲೋಡು ಗ್ರಾಮದ ಪುರಾತನ ದೇವಾಲಯಕ್ಕೆ ಕಳ್ಳರು ನುಗ್ಗಿ ಗುಂಡಿ ತೋಡಿ ನಿಧಿ ಶೋಧನೆ ನಡೆಸಿದ್ದರೆ, ಇದೀಗ ಚಿಕ್ಕನಾಯಕನಹಳ್ಳಿ–ಗುಂಡಾರ್ಲಹಳ್ಳಿ ಗ್ರಾಮಗಳ ನಡುವಿನ ಕಾವಲು ರಂಗನಾಥಸ್ವಾಮಿ ದೇವಾಲಯವನ್ನು ಗುರಿಯಾಗಿಸಿದ್ದಾರೆ. ಕೆಲವು ದಿನಗಳ ಹಿಂದೆ ಅಪರಿಚಿತರು ಜೆಸಿಬಿ ಯಂತ್ರದ ಸಹಾಯದಿಂದ ದೇವಾಲಯದ ಮುಂಭಾಗದಲ್ಲಿ ಗುಂಡಿ ತೋಡಿ ನಿಧಿ ಹುಡುಕಾಟ ನಡೆಸಿರುವುದರ ಜೊತೆಗೆ ದೇವಸ್ಥಾನದ ಕಂಬಗಳನ್ನೇ ಹಾನಿಗೊಳಿಸಿದ್ದಾರೆ. ಈ ಘಟನೆ ಶನಿವಾರ ಬೆಳಕಿಗೆ ಬಂದಿದೆ.