ಹಾಸನ: ಜಮೀನು ವಿವಾದದ ಹಿನ್ನೆಯಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು ಮಾರಕಾಸ್ತ್ರಗಳಿಂದ ಮತ್ತೊಂದು ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಅರಕಲಗೂಡು ತಾಲೂಕಿನ ವಡ್ಡ್ರರಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ವಿಠಲ, ನಿಂಗರಾಜಮ್ಮ, ರಾಜೇಶ ಸೇರಿ ಐದು ಜನರ ಮೇಲೆ ಅದೇ ಗ್ರಾಮದ ಸುಮಾರು 18 ಮಂದಿ ಡ್ರ್ಯಾಗನ್, ಲಾಂಗ್, ದೊಣ್ಣೆಗಳಿಂದ. ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆ ವೇಳೆ ರಾಜಶೇಖರ್ ಗೆ ಗಂಭೀರ ಗಾಯಗಳಾಗಿದ್ದು ವಿಠಲ್ ಅವರ ಕಾರಿನ ಮೇಲೆಯೂ ಧಾಳಿ ಮಾಡಿ ಕಾರಿನ ಒಳಗಿದ್ದವರ ಮಳೆ ಮನಬಂದಂತೆ ಹಲ್ಲೆ ಮಾಡಿ ಕಾರನ್ನು ಜಖಂ ಮಾಡಲಾಗಿದೆ.