ಕಾಡು ಗೊಲ್ಲರು ಶೈವ–ವೈಷ್ಣವ ಅಥವಾ ಶ್ರೀಕೃಷ್ಣ ಆರಾಧಕರು ಅಲ್ಲ, ನಮ್ಮದೇ ಬುಡಕಟ್ಟು ಸಂಸ್ಕೃತಿಯಲ್ಲಿ ವೀರ ಪರಂಪರೆಯ ದೇವರ ಪೂಜೆಯಷ್ಟೇ ಇದೆ ಎಂದು ಜಿಲ್ಲಾ ಕಾಡುಗೊಲ್ಲ ಬುಡಕಟ್ಟು ಮಹಾಸಭಾ ಅಧ್ಯಕ್ಷ ಬಿ. ದೊಡ್ಡಯ್ಯ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಧ್ಯಾನ 3 ಗಂಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಪರಿಶಿಷ್ಟ ಪಂಗಡ ಸವಲತ್ತು ವಂಚಿಸಲು ನಮ್ಮನ್ನು ಹಿಂದು ದೇವರ ಆರಾಧಕರಂತೆ ತೋರಿಸುವ ಕುತಂತ್ರ ನಡೆಯುತ್ತಿದೆ. ಶ್ರೀಕೃಷ್ಣ ಜಯಂತಿ ನಮ್ಮ ಸಂಸ್ಕೃತಿಯ ಭಾಗವಲ್ಲ” ಎಂದರು. ಈ ವೇಳೆ ಮುಖಂಡರು ಡಿ.ಕೆ. ಗಂಗಾಧರ್, ಕಂಬೇರಹಟ್ಟಿ ನಾಗರಾಜು, ದೊಡ್ಡ ವೀರಯ್ಯ ಮುಂತಾದವರು ಮಾತನಾಡಿ, “ಕಾಡು ಗೊಲ್ಲರಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯೊಂದಿಗೆ ಸಂಬಂಧವಿಲ್ಲ.