ಮುಂಡಗೋಡ, ಸನವಳ್ಳಿಯ ಜಲಾಶಯಕ್ಕೆ,ಚಿಗಳ್ಳಿಯ ಜಲಾಶಯಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಅವರು ಗಂಗಾ ಪೂಜೆಯನ್ನು ಸಲ್ಲಿಸಿ, ಬಾಗಿನವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ವಿ.ಎಸ್.ಪಾಟೀಲ್, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರವಿಗೌಡ ಪಾಟೀಲ್, ಪ್ರಮುಖರಾದ ಕೆ.ಸಿ.ಗಲಭಿ, ಎಫ್.ಡಿ.ಗುಲ್ಯಾನವರ್ ಸೇರಿದಂತೆ ಪಟ್ಟಣ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು