ಜಲಶುದ್ದೀಕರಣ ಘಟಕದ ರಿಪೇರಿಯಿಂದ ಹಾವೇರಿ ನಗರಕ್ಕೆ ನದಿ ನೀರನ್ನೇ ಪೂರೈಸುತ್ತಿದ್ದ ಹಾವೇರಿ ನಗರಸಭೆ ಶುಕ್ರವಾರ ಮಧ್ಯಾನ್ಹದಿಂದ ಶುದ್ದೀಕರಣಗೊಂಡ ನೀರನ್ನ ಪೂರೈಸಲು ಆರಂಭಿಸಿದೆ. ಈ ವಿಷಯವನ್ನ ಹಾವೇರಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ತಿಳಿಸಿದ್ದಾರೆ. ಹಾವೇರಿ ನಾಗರಿಕರುಈ ನೀರನ್ನ ಕುಡಿಯಲು ಮತ್ತು ಅಡುಗೆಗೆ ಬಳಿಸಬಹುದು ಎಂದು ಅವರು ತಿಳಿಸಿದರು.