ಸಾರ್ವಜಿಕ ಗಣೇಶೋತ್ಸವದಲ್ಲಿನ ಸರ್ಕಾರದ ಹೊಸ ನಿಯಮಗಳಿಗೆ ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ ಅಸಮಧಾನ ವ್ಯಕ್ತಪಡಿಸಿದ್ದಾರೆ. ಗೌರಿ ಗಣೇಶೋತ್ಸವದಲ್ಲಿ ಡಿಜೆ ಬ್ಯಾನ್ ವಿಚಾರದಲ್ಲಿನ ನ್ಯಾಯಾಲಯದ ತೀರ್ಪು ಪಾಲಿಸೋಣ. ಆದ್ರೆ ರಾತ್ರಿ 10 ಗಂಟೆಗೆ ಒಳಗೆ ಎಲ್ಲಾ ಮುಗಿಸಿ ಅಂತ ಸರ್ಕಾರ ಹೇಳಿರೋದಕ್ಕೆ ನನ್ನ ವಿರೋಧವಿದೆ. ವಿಶೇಷ ಸಂದರ್ಭಗಳಲ್ಲಿ 12 ಗಂಟೆಯವರೆಗೆ ಅನುಮತಿ ಕೊಡಬಹುದು ಅಂತ ಸುಪ್ರಿಂ ಕೋರ್ಟ್ ಹೇಳಿದೆ. ಅಷ್ಟು ಸಮಯ ಅನುಮತಿ ಕೊಡುವುದಕ್ಕೆ ಸರ್ಕಾರಕ್ಕೆ ಏನ್ ಸಮಸ್ಯೆ..? ಅಲ್ಲದೆ ಮೆರವಣಿಗೆ ಅನುಮತಿಗೆ ಪೊಲೀಸರಿಗೆ ಸಾವಿರದ ಐನೂರು ಕೊಡಬೇಕಂತೆ. ಇದೆಲ್ಲಾ ಏನು ಕಾನೂನು ಅಂತ ಪ್ರಶ್ನಿಸಿರುವ ಮಾಜಿ ಸ್ಪೀಕರ್ ಬೋಪಯ್ಯ, ಈ ದರಿದ್ರ ಕಾಂಗ್ರೆಸ್ ಸರ್ಕಾರ ಬಂದಮೇಲೆ ಹಿಂದೂಗಳ ಆಚರಣೆಗಳಿಗೆ ಹೀಗೆ ಕಠಿಣ ನಿಯಮ ಹಾಕಿ ತೊಂದರೆ ಕೊಡ್ತ