ಶಿರಸಿ:ಗಾಂಜಾ ಮಾದಕ ವಸ್ತು ಸೇವಿಸಿದ ಬಗ್ಗೆ ವೈಧ್ಯಕೀಯ ಪರೀಕ್ಷೆ ದೃಢಪಟ್ಟ ಹಿನ್ನಲೆಯಲ್ಲಿ ಶಿರಸಿ ನಗರ ಠಾಣೆ ಪೊಲೀಸರು ಇಂದು ಇಬ್ಬರನ್ನು ಬಂಧಿಸಿದ ಘಟನೆ ಜರುಗಿದೆ. ಶಿರಸಿಯ ದಮನಬೈಲ್ ನಿವಾಸಿ ಪ್ರದೀಪ ಶೆಟ್ಟಿ, (34) ಹಾಗೂ ಮೊಹಮದ್ ರೇನಿಸ್ ಹನಿಫಾ ಪಿ. ವಿ ವಿಳಾಸ : ಮಲಪುರಂ, ಕೇರಳ ಹಾಲಿ ಇಂದಿರಾನಗರ, ಶಿರಸಿ ಬಂಧಿತ ಆರೋಪಿಗಳಾಗಿದ್ದಾರೆ. ಶಿರಸಿ ಸುಪ್ರಸನ್ನ ನಗರದ ಕ್ಯಾಪ್ಟನ್ ಕ್ಯಾಂಪಸ್ ಹೋಗುವ ಕಚ್ಚಾ ರಸ್ತೆಯಲ್ಲಿ ಸಿಕ್ಕವರಿಗೆ, ಗಾಂಜಾ ಅಮಲು ಪಧಾರ್ಥ ಸೇವನೆ ಮಾಡಿದ್ದು ವೈದ್ಯಕಿಯ ಪರೀಕ್ಷೆ ಯಿಂದ ದೃಢ ಪಟ್ಟಿದ್ದರಿಂದ ಪೊಲೀಸ್ ರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.