ನಗರದ ಮುಖ್ಯ ರಸ್ತೆಅಗಲೀಕರಣ ಕಾಮಗಾರಿ ವಿಳಂಬವನ್ನ ಖಂಡಿಸಿ, ನಗರದ ನಗರಸಭೆ ಮುಂಭಾಗ ಗುರುವಾರ ರೈತಸಂಘದಿಂದ ಪ್ರತಿಭಟನೆ ನಡೆಸಿದರು.ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಅಂಬೇಡ್ಕರ್ ವೃತ್ತದಿಂದ ವೇದಾವತಿ ನದಿ ಸೇತುವೆವರೆಗೆ ನಡೆಯುತ್ತಿರುವ ಕಾಮಗಾರಿ ಪ್ರಾರಂಭವಾಗಿ ಒಂದು ವರ್ಷ ಕಳೆದರೂ ಕಾಮಗಾರಿ ತ್ವರಿತವಾಗಿ ನಡೆಸದೆ ವಿಳಂಬ ಮಾಡುತ್ತಿದ್ದಾರೆ.ಕಾಮಗಾರಿಯಲ್ಲಿ ತೀವ್ರ ಕಳಪೆ ನಡೆಯುತ್ತಿರುವ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮವಹಿಸುತ್ತಿಲ್ಲ ಎಂದ ಆರೋಪಿಸಿದರು. ನಗರದ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿದ್ದು, ಅಲ್ಲಲ್ಲಿ ಗುಂಡಿಗಳು ಬಿದ್ದಿವೆ ಎಂದರು.