ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಟಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ 58ನೇ ವರ್ಷದ ಗಣೇಶಮೂರ್ತಿ ರಾಜಬೀದಿ ಉತ್ಸವಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಯಲ್ಲಿ ಪೊಲೀಸ್ ಕವಾಯಿತ್ ಹಾಗೂ ಹಿಂದೂ ಸಂಘಟನೆಗಳ ಬೈಕ್ ರ‍್ಯಾಲಿ ನಡೆಯಿತು. ನಂತರ ಶನಿವಾರ ಸಂಜೆ 5:45 ಕ್ಕೆರಾಜಬೀದಿ ಉತ್ಸವದ ಮೆರವಣಿಗೆ ಚಾಲನೆ ನೀಡಿದರು. ರಾಜಬೀದಿ ಉತ್ಸವಕ್ಕೆ ಹಿಂದೂ ಮಹಾಸಭಾದ ಆಧ್ಯಕ್ಷ ಸುಧೀರ್ ಪಿ ಮತ್ತು ಕಾರ್ಯದರ್ಶಿ ಮುರುಳಿಧರ ಕೆರೆಹಳ್ಳಿ ಚಾಲನೆ ನೀಡುತ್ತಿದ್ದಂತೆ ಗಣೇಶ ಉತ್ಸವವು ಆರಂಭಗೊಂಡು ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದ ಮಾರ್ಗವಾಗಿ ಶಿವಮೊಗ್ಗ ರಸ್ತೆಯ ಹೊರಟಿತು.