ಯಲ್ಲಾಪುರ : ಪಟ್ಟಣದ ದೇವಿ ಮೈದಾನದ ಸಾರ್ವಜನಿಕ ಗಜಾನನೋತ್ಸವ ಸಮಿತಿಯಿಂದ 43ನೇ ವರ್ಷದ ಗಣೇಶೋತ್ಸವದಲ್ಲಿ ಪ್ರತಿನಿತ್ಯ ಗಣಹೋಮ ಹಾಗೂ ಅನ್ನಸಂತರ್ಪಣೆ ನಡೆಯುತ್ತಿದೆ. ಹಾಗೂಸವಣಗೇರಿ ಸರ್ಕಾರಿ ಶಾಲೆಯ ಮಕ್ಕಳ ಏಕಪಾತ್ರಭಿನಯ,ಛದ್ಮವೇಷ,ಭಜನೆ, ಯಕ್ಷಗಾನ,ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಿತಿಯ ಅಧ್ಯಕ್ಷ ಗಣೇಶ ಪತ್ತಾರ, ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹೊಕ್ಕೇರಿ, ಸಮಿತಿಯ ಪ್ರಮುಖರಾದ ವಿಜಯಶಂಕರ ನಾಯ್ಕ, ನಾರಾಯಣ ಭಟ್ಟ ಸುಣಜೋಗ, ಸವಣಗೇರಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಕೊಂಕಣಕೊಪ್ಪ, ಅವರ ನೇತೃತ್ವ ದಲ್ಲಿ ಯಶಸ್ವಿ ಯಾಗಿ ನಡೆದವು..